pcard

 

 

ಮೂಡಿಗೆರೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಥಿ ಬ್ಯಾಂಕ್ 2024-25ನೇ ಸಾಲಿಗೆ  ರೂ 58 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ25% ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದು ಬ್ಯಾಂಕ್ ನ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಬಿ. ಶಿವಣ್ಣ ಹಳಸೆ ತಿಳಿಸಿದರು.

ಶನಿವಾರ ಮೂಡಿಗೆರೆ ರೈತ ಭವನ ಹಮ್ಮಿಕೊಂಡಿದ್ದ ಬ್ಯಾಂಕಿನ 89 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ದಿನಾಂಕ 10-05-1935 ರಲ್ಲಿ ಸ್ಥಾಪಿತವಾಗಿ ಇದುವರಿಗೆ ರೈತಾಪಿ ವರ್ಗದವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಸಹಕಾರ ಸಂಸ್ಥೆಯಾಗಿದ್ದು, ಇದು ಮೂಡಿಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ 140 ಹಳ್ಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದೆ  ಎಂದರು.

ಬ್ಯಾಂಕು 2024-25 ನೇ ಸಾಲಿನಲ್ಲಿ ರೂ.58,64,637/- ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ25% ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ.
ದಿನಾಂಕ 31-03-2024 ರ ಅಂತ್ಯಕ್ಕೆ ಒಟ್ಟು 3325 “ಎ” ತರಗತಿ ಸದಸ್ಯರಿದ್ದು ಒಟ್ಟಾರೆಯಾಗಿ ಷೇರು ಬಂಡವಾಳ ರೂ.110.35 ಲಕ್ಷ ಇರುತ್ತದೆ.
ಬ್ಯಾಂಕಿನಲ್ಲಿ ದಿನಾಂಕ 31-03-2025 ಕ್ಕೆ ಆಪದ್ಥನ ನಿಧಿ ರೂ.458.41 ಲಕ್ಷ ಇರುತ್ತದೆ. ಕಟ್ಟಡ ನಿಧಿ ರೂ.109.91ಲಕ್ಷ ಹಾಗೂ ಇತರೆ ನಿಧಿಗಳು ರೂ.316.14 ಲಕ್ಷಗಳಿದ್ದು ಒಟ್ಟಾರೆಯಾಗಿ ರೂ.884.62 ಲಕ್ಷ ನಿಧಿಗಳಿರುತ್ತದೆ. ಬ್ಯಾಂಕಿನ ಷೇರು ಬಂಡವಾಳ ಮತ್ತು ಇತರೆ ನಿಧಿಗಳನ್ನು ರಾಜ್ಯ ಬ್ಯಾಂಕಿನಲ್ಲಿ ಹಾಗೂ ಇತರೆ ಸಂಸ್ಥೆಗಳಲ್ಲಿ ಠೇವಣಿಸಿದ್ದು ಇದು ದಿನಾಂಕ 31-03-2025 ಕ್ಕೆ ರೂ. 1143.01 ಲಕ್ಷಗಳಾಗಿರುತ್ತದೆ.

ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಥಿ ಬ್ಯಾಂಕಿನಿಂದ ವಿವಿಧ ಯೋಜನೆಗಳಲ್ಲಿ ಸಾಲಪಡೆದಿದ್ದು, ಇದು ದಿನಾಂಕ 31-03-2025ಕ್ಕೆ ಒಟ್ಟು ರೂ.1172.07 ಲಕ್ಷ ಇರುತ್ತದೆ. ಅಲ್ಲದೆ ಹಾಗೂ ದಿನಾಂಕ 31-03-2025 ಕ್ಕೆ ವಿವಿಧ ಯೋಜನೆಗಳಲ್ಲ್ಲಿ ನೀಡಿದ ಒಟ್ಟು ಸಾಲ ರೂ.1192.41 ಲಕ್ಷ ಸದಸ್ಯರುಗಳಿಂದ ಬರಬೇಕಾಗಿರುತ್ತದೆ. ಬ್ಯ್ಯಾಂಕು ಸದಸ್ಯರುಗಳಿಂದ ವಿವಿಧ ಠೇವಣಿಗಳನ್ನು ಸ್ವೀಕರಿಸುತ್ತಿದ್ದು ದಿನಾಂಕ 31-03-2025 ಕ್ಕೆ ಒಟ್ಟು ರೂ.116.02 ಲಕ್ಷಗಳಾಗಿರುತ್ತದೆ.

2024-25 ನೇ ಸಾಲಿನಲ್ಲಿ ಸದಸ್ಯರಿಂದ ಶೇಕಡವಾರು 86.04 ಗಳಾಗಿರುತ್ತದೆ. ಇದಕ್ಕೆ ಸಹಕರಿಸಿದ ಎಲ್ಲಾ ರೈತಾಪಿವರ್ಗದವರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ. ಅಲ್ಲದೆ ಮುಂದೆಯು ಸಹ ಇದೇರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇವೆ.ವರಧಿ ಸಾಲಿನಲ್ಲಿ ರೈತರಿಗೆ ವಿವಿದ ಯೋಜನೆಗಳಲ್ಲಿ ಸುಮಾರು 10 ಕೋಟಿ ಸಾಲ ನೀಡುವ ಗುರಿಯನ್ನು ಹೊಂದಿದ್ದು ಹಾಲಿ ಸಾಲ ನೀಡುವ ಕೆಲಸ ಪ್ರಗತಿಯಲ್ಲಿರುತ್ತದೆ ಮಾನ್ಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು.

ಈ ಸಂರ್ದಭದಲ್ಲಿ ಬ್ಯಾಂಕಿನ ಉಪಾದ್ಯಕ್ಷರಾದ ದಿವಾಕರ ಜಿ.ಕೆ. ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳಾದ ರವಿ ಓ.ಜಿ., ಭರತ್ ಕುಮಾರ್.ಹೆಚ್.ಕೆ., ಚಂದ್ರೇಶ್ ಎಂ.ಕೆ., ಜಗದೀಶ್ ಎಂ.ವಿ., ಗೋಪಾಲಗೌಡ ಕೆ.ಬಿ, ಅಶ್ವತ್ ಎಂ.ಎನ್., ದೀಪಕ್ ಕೆ.ಆರ್., ಅಣ್ಣಪ್ಪ , ರಚನ ಹೆಚ್.ಎಂ., ವಿನಂತಿ ಹೆಚ್.ಸಿ., ಶಿವರಾಜ್ ಕೆ.ಬಿ. ಹಾಗೂ ಬ್ಯಾಂಕಿನ ವ್ಯವಸ್ಥಾಪಕರಾದ ಕಾರ್ತಿಕ್ ಸಿ ಎಂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ