ಜೇಸಿಐ ಬಣಕಲ್ ವಿಸ್ಮಯದಿಂದ ಜೇಸಿ ಸಪ್ತಾಹದ ಅಂಗವಾಗಿ ಸೆಪ್ಟಂಬರ್ 8ರಂದು ಬಣಕಲ್ ಜೇಸಿ ಭವನದಲ್ಲಿ ಉಡುಪಿಯ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾಧ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸುರೇಂದ್ರ ಕೋಳೂರು ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೇಸಿಐ ಬಣಕಲ್ ವಿಸ್ಮಯದಿಂದ ಕಳೆದ 14 ವರ್ಷದಿಂದ ಅನೇಕ ಜನಪರವಾದ ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ. ಅಲ್ಲದೇ ವಲಯ ಉಪಾಧ್ಯಕ್ಷರ ಕೊಡುಗೆ ಕೂಡ ನಮ್ಮ ಸಂಸ್ಥೆ ನೀಡಿದೆ. ಸೆಪ್ಟಂಬರ್ 9ರಿಂದ 15ರವರೆಗೆ ಜೇಸಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲ ದಿನ ಬಣಕಲ್ ಜೇಸಿ ಭವನದಲ್ಲಿ ಜೇಸಿ ಧ್ವಜಾರೋಹಣ ನೆರವೇರಿಸಿ, ಸ್ಥಾಪಕ ಅಧ್ಯಕ್ಷ ಸುರೇಶ್ ಎನ್.ಶೆಟ್ಟಿ ಉದ್ಘಾಟಿಸಲಿದ್ದಾರೆ. ನಿರುದ್ಯೋಗಿಗಳಿಗೆ ವೃತ್ತಿ ಜೀವನ ಕೌಶಲ್ಯ, ವಿವಿಧ ಕ್ರೀಡೆ, ಅರೋಗ್ಯ ತಪಾಸಣೆ, ಜೇಸಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಉನ್ನತ ಚಿಕಿತ್ಸೆ ಪಡೆಯಲು ಅನುಕೂಲವಾಗಲೆಂದು ಸಪ್ತಾಹದ ಅಂಗವಾಗಿ ಸೆ.8ಕ್ಕೆ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವವರಲ್ಲಿ ನೇತ್ರ ಪೊರೆ ಚಿಕಿತ್ಸೆ ಹಾಗೂ ಮಸೂರ ಅಳವಡಿಕೆ ಮಾಡಿಸಿಕೊಳ್ಳುವವರು ಕಂಡು ಬಂದರೆ ಅವರಿಗೆ ಸಂಸ್ಥೆವತಿಯಿಂದಲೇ ಊಟ, ವಸತಿ, ಪ್ರಯಾಣದ ವ್ಯವಸ್ಥೆ ಕೂಡ ಮಾಡಿಕೊಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸಂಸ್ಥೆ ನಿಕಟವೂರ್ವ ಅಧ್ಯಕ್ಷ ಮಧನ್ ಹೆಗಡೆ, ಪೂರ್ವಾಧ್ಯಕ್ಷರಾದ ಗಜೇಂದ್ರ ಕೊಟ್ಟಿಗೆಹಾರ, ಶರತ್ ಪಲ್ಗುಣಿ, ರವಿ ಶಂಕರ್ ಉಪಸ್ಥಿತರಿದ್ದರು.



