ಜೇಸಿಐ ಬಣಕಲ್ ವಿಸ್ಮಯ ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸೆಪ್ಟಂಬರ್ 9 ರಿಂದ 15ರವರೆಗೆ ಒಂದು ವಾರ ಕಾಲ ನಡೆಯುವ ಜೇಸಿ ಸಪ್ತಾಹಕ್ಕೆ ಮಂಗಳವಾರ ಪಟ್ಟಣದ ಜೇಸಿ ಭವನದಲ್ಲಿ ಚಾಲನೆ ನೀಡಲಾಯಿತು.
ಬಣಕಲ್ ಜೇಸಿ ಭವನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತಾಹಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಬಣಕಲ್ ಜೇಸಿ ಮಾಜಿ ಅಧ್ಯಕ್ಷ ಎನ್. ಟಿ. ದಿನೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಸುರೇಂದ್ರ ಕೋಳೂರು ಮಾತನಾಡಿ ಜೇಸಿಐ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಏಳು ದಿನಗಳ ಕಾಲ ಜೇಸಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಂದು ವಾರ ಕಾಲ ವಿವಿಧ ಕಾರ್ಯಕ್ರಮಗಳನ್ನು, ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರಾದ ಶರತ್ ಪಲ್ಗುಣಿ, ಜೇಸಿ ಸಪ್ತಾಹ ನಿರ್ದೇಶಕರಾದ ರಂಜಿತ್ , ಜೇಸಿಐ ಮತ್ತು ಲೇಡಿ ಜೇಸಿ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಜರಿದ್ದರು



