ಮೂಡಿಗೆರೆ ತಾಲ್ಲೂಕು ಹಂತೂರು ಗ್ರಾಮದ ದಿವಂಗತ ಮಂಜೇಗೌಡರ ಧರ್ಮಪತ್ನಿ, ಹಿರಿಯ ಕಾಫಿ ಬೆಳೆಗಾರರಾಗಿದ್ದ ಶ್ರೀಮತಿ ಯಶೋದಮ್ಮ(88 ವರ್ಷ)
ಭಾನುವಾರ ಮಧ್ಯಾಹ್ನ ದೈವಾದೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
(ಹಂತೂರು ಉಮೇಶ್ ಮತ್ತು ಜನ್ನಾಪುರ ಗವಿಕಲ್ ಕ್ಲಬ್ ಮಾಲೀಕರು, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಸತೀಶ್ ಅವರ ತಾಯಿ)
ಮೃತರ ಅಂತ್ಯಕ್ರಿಯೆ ನಾಳೆ (ಸೋಮವಾರ) ಬೆಳಗ್ಗೆ 10-30 ಕ್ಕೆ ಜನ್ನಾಪುರದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.



