life support 1

 

 

ಜೆಸಿಐ ಬಣಕಲ್ ವಿಸ್ಮಯ ಘಟಕ ಮತ್ತು ಕಸ್ತೂರಬಾ ಮೆಡಿಕಲ್ ಸೆಂಟರ್ ಮಂಗಳೂರು, ಸಾಯಿ ಕೃಷ್ಣ ಹಾಸ್ಪಿಟಲ್ ಕಕ್ಕಿಂಜೆ, ಕೃಷ್ಣ ಹಾಸ್ಪಿಟಲ್ ಬಣಕಲ್. ಇವರ ಸಂಯುಕ್ತ ಆಶ್ರಯದಲ್ಲಿ BSL( ಬೇಸಿಕ್ ಲೈಫ್ ಸಪೋರ್ಟ್ ) ಹಠಾತ್ ಹೃದಯ ಸಂಬಂಧಿ ತೊಂದರೆ ನಡೆದಾಗ ಆಸ್ಪತ್ರೆಗೆ ರೋಗಿಯನ್ನು ತಲುಪಿಸುವ ಮೊದಲು ಅತಿ ತುರ್ತಾಗಿ ಕೈಗೊಳ್ಳಬೇಕಾಗಿರುವ ಮಾರ್ಗ ಸೂಚಿಯನ್ನು ತಿಳಿಸುವ ಕಾರ್ಯಗಾರವನ್ನು ದಿನಾಂಕ 16-09-2025 ರ ಮಂಗಳವಾರ ದಂದು ಜೆಸಿ ಭವನ ಬಣಕಲ್ ನಲ್ಲಿ ನಡೆಸಲಾಯಿತು

ಈ ಕಾರ್ಯಗಾರದಲ್ಲಿ KMC ಆಸ್ಪತ್ರೆಯ ಕಾರ್ಡಿಯಕ್ ವಿಭಾಗದ ಡಾ. ಮೋಹನ್, ಕೃಷ್ಣ ಹಾಸ್ಪಿಟಲ್ ಮುಖ್ಯಸ್ಥರಾದ  ಅನಂತ ಭಟ್ ಹಾಗೂ ಸಿಬ್ಬಂದಿ ವರ್ಗದವರು ನಡೆಸಿಕೊಟ್ಟರು.

ನಲವತ್ತಕ್ಕೂ ಹೆಚ್ಚು ಮಂದಿ ಜೆಸಿಐ ಸದಸ್ಯರು ಮತ್ತು ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಒಬ್ಬರ ಜೀವ ಉಳಿಸುವ ಅಥವಾ ಅವರಿಗೆ ಸಹಾಯ ಮಾಡುವ ತರಬೇತಿ ಪಡೆದುಕೊಂಡರು.

ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಸುರೇಂದ್ರ ಕೋಳೂರು ಮಾತನಾಡಿ ಮನೆಯಲ್ಲೇ ಯಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ತುರ್ತಾಗಿ ಹೃದಯ ಸಂಬಂಧಿ ತೊಂದರೆ ಸಂಭವಿಸಿದಾಗ ನಾವು ಹೇಗೆ ವರ್ತಿಸಬೇಕು, ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲಿನ ಒಂದು ಕ್ಷಣವು ಎಷ್ಟು ಅತ್ಯಮೂಲ್ಯ ಎಂಬುದರ ಬಗ್ಗೆ ತರಬೇತಿ ನೀಡಿದ ವೈದ್ಯರಿಗೆ ಹಾಗೂ ಭಾಗವಹಿಸಿದ ಸಾರ್ವಜನಿಕರಿಗೆ ಮತ್ತು ಜೆಸಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಗಾರದಲ್ಲಿ ವಿಸ್ಮಯ ಸಂಸ್ಥೆ ಎಲ್ಲಾ ಪೂರ್ವ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ