theft

 

 

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ದಾಸರಹಳ್ಳಿ ಗ್ರಾಮದಲ್ಲಿ ತೋಟದ ಮನೆಯಲ್ಲಿಟ್ಟಿದ್ದ 195 ಕೆಜಿ ಕಾಳುಮೆಣಸನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿಗಳ ನೇತೃತ್ವದ ಪೊಲೀಸ್ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಬಂಧಿತರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬಂಧಿತರಿಂದ  1.2 ಲಕ್ಷ ಬೆಲೆಯ 192 ಕೆಜಿ ಕಾಳು ಮೆಣಸು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮತ್ತು ರೂ. 10,000/- ನಗದು ವಶಪಡಿಸಿಕೊಂಡಿರುತ್ತಾರೆ.
ಪೊಲೀಸ್ ತಂಡದಲ್ಲಿ ಪಿಐ   ಸಚಿನ್ ಕುಮಾರ್, ಪಿಎಸ್ಐ   ರಘುನಾಥ್ ಎಸ್ ವಿ ಮತ್ತು ಪೊಲೀಸ್ ಸಿಬ್ಬಂದಿಗಳಾದ  ಲೋಹಿತ್,  ರಮೇಶ,   ಲಕ್ಷ್ಮಣ,   ಕಿರಣ,   ಶಿವರಾಜ,   ಶಶಿಧರ ಮತ್ತು   ವಿನಾಯಕ ರವರು ಕಾರ್ಯನಿರ್ವಹಿಸಿರುತ್ತಾರೆ.
ಕಾಫಿ, ಕಾಳುಮೆಣಸು, ಇತರೆ ಬೆಳೆಗಾರರು ತಮ್ಮ ಬೆಲೆಬಾಳುವ ಪದಾರ್ಥಗಳನ್ನು ಸಂರಕ್ಷಿಸಲು ಎಸ್ಟೇಟ್, ತೋಟ & ಸಂಗ್ರಹಗಾರಗಳಲ್ಲಿ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ.
ಸುರಕ್ಷತೆಗಾಗಿ ಅನುಸರಿಸಬೇಕಾದ ಕ್ರಮಗಳು:-
1. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು.
2. ಸುಗ್ಗಿ ಋತುಗಳು, ಫಸಲು ಸಂದರ್ಭಗಳಲ್ಲಿ ಭದ್ರತಾ ಗಸ್ತು ಹೆಚ್ಚಿಸುವುದು.
3. ಭದ್ರತಾ ಕರ್ತವ್ಯಕ್ಕೆ ಪೊಲೀಸ್ ರಿಂದ ಪೂರ್ವಾಪರ ಪರಿಶೀಲಿಸಿ ಉತ್ತಮ ಒಳ್ಳೆಯ ಚಾರಿತ್ರ್ಯವುಳ್ಳ ಸೆಕ್ಯೂರಿಟಿ ಗಾರ್ಡ್ ರನ್ನು ನೇಮಿಸಿಕೊಳ್ಳುವುದು.
4. ಉತ್ಪಾದನೆ, ಕೊಯ್ಲು ಸಂಗ್ರಹಣೆಯ ದಾಖಲೆಗಳನ್ನು ನಿರ್ವಹಿಸಿ ಆಡಿಟ್ ಮಾಡಿಸುವುದು ಲೇಬಲ್ & ಟ್ಯಾಗ್ ಗಳನ್ನು ಬಳಸುವುದು
5. ಕೆಲಸಗಾರರ, ಉದ್ಯೋಗಿಗಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು,
6. ಸುರಕ್ಷತೆ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸುವುದು,
7. ಉತ್ತಮ ಲಾಕ್ ಗಳನ್ನು ಬಳಸಿ ಸಂಗ್ರಹಣೆ ಮಾಡುವುದು, ಜಿಪಿಎಸ್ ಫೆನ್ಸಿಂಗ್ ಮತ್ತು ಇತರೆ ಟ್ರ್ಯಾಕಿಂಗ್ ಡಿವೈಸ್ ಸಾಧನಗಳನ್ನು ಬಳಸುವುದು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ