February 14, 2026

 

 

ಚಿಕ್ಕಮಗಳೂರು ನಗರದ ಬಾರ್‌ ಒಂದರಲ್ಲಿ ಬಾರ್ ಕ್ಯಾಷಿಯರ್ ಮೇಲೆ ಕಾರ್ಮಿಕರು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾರ್ ನಲ್ಲಿ ಬಿಹಾರಿ ಮೂಲದ ಕಾರ್ಮಿಕರು ಹಾಗೂ ವ್ಯಕ್ತಿಯೊಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಚಿಕ್ಕಮಗಳೂರು ನಗರದ ತೇಜು (40) ಬಿಹಾರಿ ಕಾರ್ಮಿಕರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ  ವ್ಯಕ್ತಿ.

ಮಂಗಳವಾರ ರಾತ್ರಿ ಚಿಕ್ಕಮಗಳೂರು ಮಾರ್ಕೇರ್ ರಸ್ತೆಯಲ್ಲಿರುವ ಪೇಜ್ ತ್ರಿ (ಹಳೆಯ ಪ್ರೀತಂ ಬಾರ್‌)ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಬಾರ್ ಕ್ಯಾಷಿಯರ್ ತೇಜು ನಡುವೆ ಮಾತಿನ ಚಕಮಕಿಯಾಗಿತ್ತು ಎನ್ನಲಾಗಿದೆ. ಇದು ವಿಕೋಪಕ್ಕೆ ತೆರಳಿ ತೇಜು ಮೇಲೆ ಕಾರ್ಮಿಕರು ತೀವ್ರ ಹಲ್ಲೆ ಮಾಡಿದ್ದು, ಅಸ್ವಸ್ಥಗೊಂಡ ಬಳಿಕ ಒಂದು ಕಿಮೀ ದೂರದ ಪಟಾಕಿ ಮೈದಾನಕ್ಕೆ ತಂದು ಎಸೆದಿದ್ದರು ಎಂದು ಆರೋಪಿಸಲಾಗಿದೆ.

ಬುಧವಾರ ಬೆಳಗ್ಗೆ ಆಟೋ ಚಾಲಕರೊಬ್ಬರು ತೇಜುವನ್ನು ನೋಡಿ, ಉಸಿರಾಡುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ಸೇರಿಸಿದ್ದರು.  

ತೀವ್ರ ಹಲ್ಲೆಯಾಗಿದ್ದರಿಂದ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹಲ್ಲೆ ನಡೆಸಿದ ಬಿಹಾರಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ