February 6, 2026

 

 

ಆಲ್ದೂರು ಸಮೀಪದ ಹವ್ವಳ್ಳಿ ವಾರ್ಡಿನ ವಗರ್ ರಸ್ತೆ ನಿವೇಶನ ರಹಿತ ನಿವಾಸಿಗಳು ಮಂಗಳವಾರ ನಮ್ಮ ಭೂಮಿ ನಮ್ಮ ತೋಟ ಯೋಜನೆಯ ಜಮೀನಿಗೆ ನಿವೇಶನಕ್ಕಾಗಿ ಗುಡಿಸಲು ಹಾಕಿದ್ದು, ನಿವೇಶನ ಒದಗಿಸುವಂತೆ ಒತ್ತಾಯ ಮಾಡಿದ್ದಾರೆ.

ಹಲವು ದಶಕಗಳಿಂದ ಗಾರೆ, ತೋಟದ ಕೆಲಸ, ಇನ್ನಿತರ ಕೂಲಿ ಕೆಲಸಗಳನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು, ಬಾಡಿಗೆ ಮನೆಗಳಲ್ಲಿ ವಾಸವಿದ್ದೇವೆ,ಚುನಾವಣೆ ಬಂದಾಗ ಆಶ್ವಾಸನೆಗಳ ಮಹಾಪೂರವನ್ನೇ ನೀಡುವ ಜನಪ್ರತಿನಿಧಿಗಳು ಸ್ವಂತ ಸೂರು ನಿರ್ಮಿಸಿಕೊಳ್ಳಲು ಮೂಲಭೂತ ಅವಶ್ಯಕತೆ ಯಾದ ನಿವೇಶನವನ್ನು ಒದಗಿಸದೆ ನಿವೇಶನ ರೈತರನ್ನು ಕಡೆಗಣಿಸುತ್ತಾ ಬಂದಿದ್ದಾರೆ

ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಕಾರ್ಮಿಕರು, ಮತ್ತು ಉತ್ತರ ಭಾರತದ ಕೆಲ ರಾಜ್ಯಗಳಿಂದ ಕಾರ್ಮಿಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ವಲಸೆ ಬರುತ್ತಿದ್ದು, ಇದರಿಂದ ಬಾಡಿಗೆ ಮನೆಗಳ ಮಾಲೀಕರು ಮನೆಯ ಬಾಡಿಗೆಯನ್ನು ವಿಪರೀತ ಹೆಚ್ಚಿಸುತ್ತಿದ್ದಾರೆ. ದಿನಗೂಲಿ ಕೆಲಸ ಮಾಡಿಕೊಂಡು, ಮಕ್ಕಳ ವಿದ್ಯಾಭ್ಯಾಸ, ಸಂಘಗಳ ಸಾಲ, ಹೀಗೆ ಸಾಕಷ್ಟು ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ನಮಗೆ ಬಾಡಿಗೆ ನಿರ್ವಹಿಸುವುದು ಇನ್ನಷ್ಟು ತಲೆ ನೋವಾಗಿದ್ದು,ಸ್ವಂತ ಸೂರು ಎಂಬುದು ಕನಸಾಗಿಯೇ ಉಳಿದಿದೆ ಇನ್ನಾದರೂ ಅಧಿಕಾರಿಗಳು ಶೀಘ್ರವಾಗಿ ನಿವೇಶನ ರಹಿತರ ಆಯ್ಕೆ ಮಾಡಿ ಹಕ್ಕುಪತ್ರ ವಿತರಣೆ ಮಾಡಬೇಕೆಂದು ನಿವೇಶನ ರಹಿತರಾದ ಭರತ್ ,ಶರತ್, ಉಮೇಶ್, ಜಾಫರ್ ,ಚಂದ್ರ, ಕಮಲಮ್ಮ, ಗೌತಮಿ, ಮಂಜುಳಾ ,ಹೇಮಾವತಿ, ಪುಷ್ಪ, ಜಯಮ್ಮ, ವಿಜಯ, ಇಂದ್ರ ,ಸುಚಿತ್ರ, ಅರುಣ್, ಬಾಬು, ಮುಸ್ತಫ, ಕಣ್ಣ ,ದಿಲೀಪ, ರಿಯಾಜ್ ,ಒತ್ತಾಯ ಮಾಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಮಾತನಾಡಿ ಪ್ರಸ್ತುತ ನಿವೇಶನ ರಹಿತರು 2007ರಲ್ಲಿ ಪ್ರಾರಂಭವಾದ ಹವ್ವಳ್ಳಿ ವಾರ್ಡಿನ ಜಮೀನಾದ   ಸರ್ವೆ ನಂಬರ್ 387 ರಲ್ಲಿ 3 ಎಕರೆ 11ಗುಂಟೆ, ಸರ್ವೆ ನಂಬರ್ 187 ರಲ್ಲಿ 1 ಎಕರೆ 11ಗುಂಟೆ ಗುಡಿಸಲು ಹಾಕಿಕೊಂಡಿದ್ದು, ಪಹಣಿಯಲ್ಲಿ ಕಾರ್ಯದರ್ಶಿ ಎಂದು ಉಲ್ಲೇಖವಾಗುತ್ತಿದೆ ಕಂದಾಯ ಇಲಾಖೆಯವರು ಇನ್ನು ಕೂಡ ಆರ್ ಡಿ ಪಿ ಆರ್ ಇಲಾಖೆಗೆ ಸಂಬಂಧಪಟ್ಟ ಜಮೀನನ್ನು ವರ್ಗಾವಣೆ ಮಾಡಿಲ್ಲವಾದ್ದರಿಂದ ಈ ಕುರಿತು ತಹಶೀಲ್ದಾರ್ ಬಳಿ ಚರ್ಚಿಸಲಾಗಿದೆ. ಜಮೀನನ್ನು ಕಂದಾಯ ಇಲಾಖೆಯಿಂದ ವರ್ಗಾವಣೆ ಆದ ಬಳಿಕ ಈಗಾಗಲೇ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯವಾಗಿರುವುದರಿಂದ ಚುನಾವಣೆ ನಡೆದು ಹೊಸ ಪ್ರತಿನಿಧಿಗಳು ಆಯ್ಕೆ ಆದ ನಂತರ ಹದ್ದುಬಸ್ತು ಮಾಡಿ ಲೇಔಟ್ ನಿರ್ಮಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ.

ಇಷ್ಟೆಲ್ಲಾ ನಿಯಮಾವಳಿ ಗಳನ್ನು ಪಂಚಾಯತ್ ರಾಜ್ ಇಲಾಖೆ ನಿವೇಶನ ಹಂಚಿಕೆಯಲ್ಲಿ ನಿರ್ವಹಣೆ ಮಾಡಬೇಕಾಗಿರುವುದರಿಂದ ನಿವೇಶನ ರಹಿತರು ಮಂಗಳವಾರ ಗುಡಿಸಲು ಹಾಕಿದ ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ನೀಡಿ ಮಾಹಿತಿ ಒದಗಿಸಲು ಸೂಚಿಸಿದ್ದೇವೆ. ಕಾನೂನು ಬಾಹಿರವಾಗಿ ಗುಡಿಸಲು ಹಾಕಿರುವ ನಿವೇಶನರಹಿತರನ್ನು ಗುರುವಾರ ಖುದ್ದಾಗಿ ಭೇಟಿ ಮಾಡಿ ನಿವೇಶನ ಹಂಚಿಕೆಗೆ ಇರುವ ನಿಯಮಾವಳಿ ಗಳ ಮಾಹಿತಿಯನ್ನು ತಿಳಿಯಪಡಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ