ಮೂಡಿಗೆರೆ ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸವಿತಾ ಮಹರ್ಷಿ ಜಯಂತಿ ಮತ್ತು ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಹೆಚ್.ವಿ. ಮಹೇಶ್, ಕಾರ್ಯದರ್ಶಿ ಆನಂದ್, ಸಹಕಾರ್ಯದರ್ಶಿ ಪ್ರಸನ್ನ ಬಿಳ್ಳೂರು, ಖಜಾಂಚಿ ಪಿ.ಕೆ. ಲೋಕೇಶ್, ರಾಜ್ಯವಿಭಾಗದ ಕಾರ್ಯದರ್ಶಿ ವಿ.ಪಿ. ನಾರಾಯಣ್, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಲೋಕೇಶ್, ವಕೀಲರಾದ ಭಾಗ್ಯ ನಾರಾಯಣ್, ಮೆಸ್ಕಾಂ ಜೆ.ಇ. ರವಿಕುಮಾರ್, ಸಬ್ ರಿಜಿಸ್ಟ್ರಾರ್ ಪಿ.ಎಸ್. ನಾರಾಯಣ್, ಹೆಚ್.ಎಂ. ಲೋಕೇಶ್, ನಾಗೇಶ್, ಮಂಜುನಾಥ್, ಗಿರೀಶ್ ಶಶಿಧರ್, ರಾಜು, ವೆಂಕಟೇಶ್, ಭಾಸ್ಕರ್, ಹರೀಶ್, ಚಂದ್ರಶೇಖರ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.



