ಅಪಘಾತ ಪ್ರಕರಣದಲ್ಲಿ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಪೋಗೆ ಸೇರಿದ ಸರ್ಕಾರಿ ಬಸ್ಸನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವಶಕ್ಕೆ ಪಡೆಯಲಾಗಿದೆ.
ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ ನಾಗರತ್ನಮ್ಮ ಎಂಬವರಿಗೆ 12.41 ಲಕ್ಷ ರೂ. ಪರಿಹಾರದ ಹಣ ಕ್ಲೈಮ್ ಆಗದಿದ್ದಕ್ಕೆ ಪ್ರಯಾಣಿಕರನ್ನು ಇಳಿಸಿ ವಾಹನ ಸೀಜ್ ಮಾಡಲಾಗಿದೆ.
ಎರಡು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ವಕೀಲರ ತಂಡ ಬಸ್ಸನ್ನು ವಶಕ್ಕೆ ಪಡೆದಿದೆ. ಪೊಲೀಸರನ್ನು ಕರೆ ತರದೆ ಮಾಹಿತಿಯನ್ನು ನೀಡದೆ ಏಕಾಏಕಿ ವಾಹನ ತಡೆದ ವಕೀಲರ ಕ್ರಮವನ್ನು ಪ್ರಯಾಣಿಕರು ಖಂಡಿಸಿದ್ದಾರೆ.
ಅಪಘಾತದ ಹಣ ಕ್ಲೈಮ್ ಆಗದಿದ್ದಕ್ಕೆ ನ್ಯಾಯಾಲಯದಿಂದ ವಾಹನ ಸೀಜ್ ಗೆ ಆದೇಶ ಪಡೆಯಲಾಗಿತ್ತು.
ಮೂವರು ವಕೀಲರ ತಂಡದಿಂದ ಎರಡು ಸರ್ಕಾರಿ ಬಸ್ ಸೀಜ್ ಮಾಡಿ ವಾಹನವನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಲಾಗಿದೆ.
ರಸ್ತೆ ಮಧ್ಯೆ ಇಳಿಸಿದ್ದರಿಂದ ಸರ್ಕಾರದ ವಿರುದ್ಧ ಎರಡೂ ಬಸ್ಸಿನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಶೃಂಗೇರಿಗೆ ಬಂದು ಬೆಂಗಳೂರಿಗೆ ಹೋಗುತ್ತಿದ್ದ ಮತ್ತು ಬೆಂಗಳೂರಿನಿಂದ ಮತ್ತೆ ಚಿಕ್ಕಮಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಬಸ್ಸುಗಳನ್ನು ತಡೆಯಲಾಗಿದೆ.



