WhatsApp Image 2026-02-24 at 2.09.54 AM

 

 

ಚಿಕ್ಕಮಗಳೂರು ತಾಲ್ಲೂಕು ಬಸ್ಕಲ್ ಸಂತ ಜೋಸೆಫರ ದೇವಾಲಯದಲ್ಲಿ ಚಿಕ್ಕಮಗಳೂರಿನ ಹೋಲಿ ಕ್ರಾಸ್, ರಕ್ತ ನಿಧಿ ಕೇಂದ್ರದ ವತಿಯಿಂದ ರಕ್ತದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ಭಾನುವಾರ ನಡೆಯಿತು.

ಧರ್ಮ ಕೇಂದ್ರ ಗುರು ಜೇಮ್ಸ್ ಚಾರ್ಲಿ ಶಿಬಿರವನ್ನು ಉದ್ಘಾಟಿಸಿ ರಕ್ತದಾನವು ಅತ್ಯಂತ ಶ್ರೇಷ್ಠತೆಯ ಸಮಾಜಮುಖಿ ಸೇವೆಯಾಗಿದ್ದು ಅಮೂಲ್ಯವಾದ ಮನುಷ್ಯನ ಜೀವವನ್ನು ಕಾಪಾಡಲು ಇರುವಂತಹ ಪವಿತ್ರವಾದ ಅವಕಾಶವಾಗಿದೆ ಎಂದರು.

ಸಿಸ್ಟರ್ ನವ್ಯ ರವರು ರಕ್ತದಾನದ ಮಹತ್ವ ನೀಡಲು ಇರುವಂತಹ ವಯೋಮಿತಿಯ ನಿಯಮಗಳು ರಕ್ತದಾನವನ್ನು ರೋಗಿಗಳಿಗೆ ಮತ್ತು ಅಪಘಾತ, ಹೆರಿಗೆ ಮುಂತಾದ ತುರ್ತು ಸಂದರ್ಭಗಳಲ್ಲಿ ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹಿಸಲು ಸಾಧ್ಯ ರಕ್ತದಾನದಿಂದ ಯಾವುದೇ ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವುದಿಲ್ಲ ಎಂಬ ಮಾಹಿತಿಗಳನ್ನು ಹಂಚಿಕೊಂಡರು.

ಶಿಬಿರದಲ್ಲಿ 34 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಬಳಿಕ ಕಣ್ಣಿನ ಪೊರೆ,ದೃಷ್ಟಿ ದೋಷವಿರುವವರಿಗೆ ಉಚಿತ ನೇತ್ರ ತಪಾಸಣೆಯನ್ನು ನಡೆಸಲಾಯಿತು. ಹೋಲಿ ಕ್ರಾಸ್ ಸಂಸ್ಥೆಯ

ಸಿಸ್ಟರ್ ಪಾಸ್ಕ, ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ