WhatsApp Image 2026-02-24 at 3.34.59 AM

 

 

ಭೀಮ್ ಆರ್ಮಿ ಜಿಲ್ಲಾ ಮತ್ತು ಹೋಬಳಿ ಘಟಕದ ವತಿಯಿಂದ ಭಾನುವಾರ ಸಂವಿಧಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಂಚಾಯಿತಿ ಪಕ್ಕದ ಆವರಣ ಪಕ್ಕದ ಜಾಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದಂತಹ ಭೀಮ್ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ್  ದೊಡ್ಡಮಾಗರವಳ್ಳಿ, 2019 ರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾರಂಭವಾದ ಭೀಮ್ ಆರ್ಮಿ ಸಂಘಟನೆಯು ಕಾರ್ಯಕರ್ತರ ಬೆಂಬಲ ಮತ್ತು ಪರಿಶ್ರಮದಿಂದ ಬಲಿಷ್ಠವಾಗಿ ಕಟ್ಟಿಕೊಂಡು ಬಂದಿದ್ದು,ದೇಶದಾದ್ಯಂತ ಉತ್ತಮವಾಗಿ ಬೆಳೆಯುತ್ತಿದೆ ಇದಕ್ಕೆ ಮುಖ್ಯ ಕಾರಣ ಸಂಘಟನೆ ಸಂಸ್ಥಾಪಕರಾದ ಚಂದ್ರಶೇಖರ್ ಆಜಾದ್ ರಾವಣ್ ರವರ ಪ್ರಭಾವ ಮತ್ತು ಅಲೆ ಬಹು ಮುಖ್ಯ ಪಾತ್ರ ವಹಿಸಿದೆ.  ಸಾಂವಿಧಾನಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ    ಜಾತ್ಯತೀತ ವ್ಯಕ್ತಿತ್ವ ಸಮಾಜಮುಖಿಯಾಗಿರುವ  ಅಶ್ರಫ್ ರವರನ್ನು ಮುಂಬರುವ ಚುನಾವಣೆಗಳಲ್ಲಿ ಯಾವುದೇ ಪಕ್ಷ ಧರ್ಮ ಬೇದವಿಲ್ಲದೆ ಬೆಂಬಲಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಬ್ಲಾಕ್ ಅಲ್ಪಸಂಖ್ಯಾತರ ಅಧ್ಯಕ್ಷ ಅಶ್ರಫ್ ಮಾತನಾಡಿ ಪ್ರಜಾಪ್ರಭುತ್ವದ ಮೂಲ ಅಡಿಪಾಯ ಸಂವಿಧಾನವಾಗಿದ್ದು, ಅಂತಹ ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಇಂತಹ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಎಲ್ಲರೂ ಬೆಂಬಲಿಸಬೇಕು ಹಾಗೆಯೇ ಭೀಮ್ ಆರ್ಮಿ ಸಂಘಟನೆ ಸಾಮಾಜಿಕ ಹೋರಾಟ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸುತಿದ್ದು, ಅದರ ಯಶಸ್ವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಕಾರಣ ಎಂದು ಅಭಿಪ್ರಾಯಪಟ್ಟರು.

ನೋಜ್ಜೆಪೇಟೆ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ್ ಕೂದುವಳ್ಳಿ, ಹೋಬಳಿ ಉಪಾಧ್ಯಕ್ಷ ಹರೀಶ್, ಯುವ ಘಟಕದ ಅಧ್ಯಕ್ಷ ಅಜಿತ್, ಉಪಾಧ್ಯಕ್ಷ ನಿಶಾನ್,

ಕಾರ್ಯದರ್ಶಿ ಗಣೇಶ್ ಹೆಡದಾಳು, ದಲಿತ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ