ಮೂಡಿಗೆರೆ ತಾಲೋಕಿನ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ವತಿಯಿಂದ ಸಿವಿಲ್ ನ್ಯಾಯಾದೀಶರಾಗಿ ಆಯ್ಕೆಯಾಗಿರುವ ನಿತೀನ್ ಕುವೆಲ್ಲೋ ಅವರನ್ನು ಸನ್ಮಾನಿಸಲಾಯಿತು.
ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಪ್ರಾನ್ಸಿಸ್ ಮಾತನಾಡಿ ; ಮೂಡಿಗೆರೆ ನಗರದ ಬಿಳುಗುಳ ವಾಸಿಯಾದ ಲಿಯೋ ಕುವೆಲ್ಲೋ ಹಾಗೂ ಅನಿತಾ ಕುವೆಲ್ಲೋ ದಂಪತಿಗಳ ಮಗನಾದ ಶ್ರೀ ನಿತಿನ್ ಕುವೆಲ್ಲೋ ಅವರು ಇತ್ತೀಚಿಗೆ ನಡೆದ ಸಿವಿಲ್ ನ್ಯಾಯಾದೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತೀರ್ಣರಾಗುವ ಮೂಲಕ ನ್ಯಾಯಾದೀಶರಾಗಿ ಆಯ್ಕೆಯಾಗಿದ್ದಾರೆ.
ಇದು ನಮ್ಮ ತಾಲೂಕಿಗೆ ಹಾಗೂ ತಾಲೂಕಿನಲ್ಲಿರುವ ಅಲ್ಪಸಂಖ್ಯಾತರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ರೀತಿಯಾಗಿ ಸಾಧನೆ ಮಾಡಿರುವ ಇವರಿಗೆ ಪ್ರೀತಿ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತಿದ್ದೇವೆ ಹಾಗೂ ತಾಲೂಕಿನ ಅನೇಕ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಿತಿನ್ ಅವರು ದಾರಿದೀಪವಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿಯಾದ ಸೋನಿಯಾ, ಖಜಾಂಚಿಯಾದ ಪಮ್ಯ, ಎಡ್ವರ್ಡ್ ಡಿಸೋಜಾ, ಮೀನಾ ಮೇರಿ, ಸುಪ್ರೀತಾ ಹಾಗೂ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಬಿಳಗುಳ ಮತ್ತು ಕಸಬಾ ಹೋಬಳಿ ಅಧ್ಯಕ್ಷರಾದ ಸಂದೀಪ್, ರಾಬಿನ್, ಅರುಣ್, ಪ್ರಾನ್ಸಿಸ್ ಅವರ ಪುತ್ರ ನಿತಿನ್ ಫ್ರಾನ್ಸಿಸ್ ಮುಂತಾದವರು ಉಪಸ್ಥಿತರಿದ್ದರು.


