ಚಿಕ್ಕಮಗಳೂರು ಸ್ವಚ್ಚ ಟ್ರಸ್ಟ್ ಗೆ ನೂತನ ಅಧ್ಯಕ್ಷರಾಗಿ ಉಮಾ ನಾಗೇಶ್ ಮತ್ತು ಉಪಾಧ್ಯಕ್ಷರಾಗಿ ಹೆಚ್.ಬಿ.ಲಕ್ಷ್ಮೀ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅನುಮಪ ಮನ್ಸೂರ್ (ಕಾರ್ಯದರ್ಶಿ), ಹರಿಣಾಕ್ಷಿ ನಾಗರಾಜ್ (ಖಜಾಂಚಿ), ಕೃಷ್ಣವೇಣಿ (ಸಹ ಕಾರ್ಯ ದರ್ಶಿ)ಗಳಾಗಿ ಆಯ್ಕೆ ಮಾಡಲಾಗಿದೆ.
ಈ ವೇಳೆ ನೂತನ ಅಧ್ಯಕ್ಷೆ ಉಮಾ ನಾಗೇಶ್ ಮಾತನಾಡಿ ಸಮಾಜದಲ್ಲಿ ಪರಿಸರ ಪ್ರಜ್ಞೆ, ಸಸಿಗಳ ಮಹತ್ವ ಹಾಗೂ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗಲಿದ್ದು, ನಿಕ ಟ ಪೂರ್ವ ಅಧ್ಯಕ್ಷರ ಮಾರ್ಗದರ್ಶನದಂತೆ ಪ್ರಕೃತಿ ಸಂಪತ್ತು ಬೆಳೆಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಜಿಲ್ಲೆ ಪ್ರವಾಸಿಗರ ತಾಣವಾಗಿದೆ. ಮುಖ್ಯವಾಗಿ ಕಸವನ್ನು ಕೆಲವು ಸಾರ್ವಜನಿಕರು ಹಾಗೂ ಪ್ರವಾಸಿಗ ರು ಎಲ್ಲೆಂದರಲ್ಲಿ ಬೀಸಾಡುವ ಸ್ಥಿತಿಯಿದೆ. ಹೀಗಾಗಿ ಟ್ರಸ್ಟ್ ವತಿಯಿಂದ ಐ.ಜಿ.ರಸ್ತೆ, ಕೈಮರ-ಸೀತಾಳಯ್ಯಗಿರಿ ಮಾರ್ಗಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಲು ಚಿಂತಿಸಲಾಗಿದೆ ಎಂದರು.
ಪ್ಲಾಸ್ಟಿಕ್ ಬಾಟಲ್‍ಗಳ ಬಳಕೆ ಹೆಚ್ಚಳಗೊಂಡು ನಗರವು ಕಲುಷಿತಗೊಳ್ಳುತ್ತಿದೆ. ಇದರಿಂದ ಮುಕ್ತಿ ಪಡೆ ಯಲು ಹೊಸದಾಗಿ ನಗರದಲ್ಲಿ ಪ್ಲಾಸ್ಟಿಕ್ ಬಾಟಲ್ ಮರುಬಳಕೆಗೆ ಆಲೋಚಿಸಲಾಗಿದ್ದು, ನಗರಸಭಾ ಆಯು ಕ್ತರು ಹಾಗೂ ಪ್ರತಿ ವಾರ್ಡಿನ ನಗರಸಭಾ ಸದಸ್ಯರು, ಸ್ಥಳೀಯ ನಿವಾಸಿಗಳ ಸಹಕಾರವು ಅತ್ಯಗತ್ಯ ಎಂದು ತಿಳಿಸಿದರು.
ಈಗಾಗಲೇ ಸ್ವಚ್ಚ ಟ್ರಸ್ಟ್ ಹಿಂದೆ ಪರಿಸರ ವಾತಾವರಣ ಕಾಪಾಡಲು ನಗರದ ಪ್ರಮುಖ ರಸ್ತೆಗಳಲ್ಲಿ ಸಸಿ ಗಳನ್ನು ನೆಟ್ಟು ಪೋಷಿಸುತ್ತಿದೆ. ಅಲ್ಲದೇ ಸ್ಥಳೀಯರಿಗೆ ಈ ಬಗ್ಗೆ ಮನವರಿಕೆ ಮಾಡಿದೆ. ಸಸಿಗಳು ನೆಟ್ಟಿರುವ ಸ್ಥಳಗಳಿಗೆ ವಾರಕ್ಕೇರಡು ಬಾರಿ ನೀರೂಣಿಸುವ ಕಾರ್ಯವು ಮಾಡಿದ್ದು ಈ ಕಾರ್ಯವನ್ನು ಮುಂದುವರೆಸ ಲಾಗುವುದು ಎಂದರು.
ನಗರದ ಸ್ವಚ್ಚತೆ ಕಾಪಾಡದೇ ಬೇಕಾಬಿಟ್ಟಿ ಕಸ ಎಸೆಯುವವರಿಗೆ ನಗರಸಭೆ ಹಾಗೂ ಟ್ರಾಫಿಕ್ ಪೊಲೀ ಸ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕಸ ಎಸೆದವರಿಗೆ ಕನಿಷ್ಟ ದಂಡವನ್ನು ವಿಧಿಸಲು ಟ್ರಸ್ಟ್ ಆಯುಕ್ತರಿಗೆ ಮ ನವಿ ಮಾಡಲಾಗುವುದು. ಅಲ್ಲದೇ ಪರಿಸರ ಪ್ರಜ್ಞೆ ಮೂಡಿಸಲು ಶಾಲಾ-ಕಾಲೇಜು, ಹಾಸ್ಟೆಲ್‍ಗಳಲ್ಲಿ ಕಾ ರ್ಯಕ್ರಮ ನಡೆಸುವ ಗುರಿಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವಚ್ಚ ಟ್ರಸ್ಟ್ ಸಂಸ್ಥಾಪಕಿ ಅಧ್ಯಕ್ಷೆ ಡಾ|| ಶುಭಾ ವಿಜಯ್ ಉಪಸ್ಥಿತರಿದ್ದರು.



