ಮೂಡಿಗೆರೆ ತಾಲ್ಲೂಕಿನ ನಿಡುವಾಳೆಯ ವಿದ್ಯಾರ್ಥಿನಿ ಕುಮಾರಿ ರಿಷಲ್ ತಾವ್ರೊ ಬಿಟೆಕ್ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ವಿದ್ಯಾರ್ಥಿನಿ ರಿಷಲ್ ತಾವ್ರೊ ಮಂಗಳೂರಿನ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ನಿಡುವಾಳೆ ಗ್ರಾಮದ ಘನತೆಗೆ ಪಾತ್ರರಾಗಿದ್ದಾರೆ.ಇವರು ನಿಡುವಾಳೆ ಜೆಎಂಜೆ ಪ್ಯಾನ್ಸಿ ಸ್ಟೋರ್ಸ್ ಮಾಲಿಕ ಜೋಸೆಫ್ ತಾವ್ರೊ ಹಾಗೂ ರೋಸ್ಲಿನ್ ದಂಪತಿಯ ಪುತ್ತಿಯಾಗಿದ್ದಾರೆ.ಇವರ ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.



