August 31, 2026
;
ai scam

 

 

ಯುವತಿಯೋರ್ವಳ ಫೋಟೋವನ್ನು ಬಳಸಿ ಅಶ್ಲೀಲ ವಿಡಿಯೋ ಸೃಷ್ಟಿ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ  ನಡೆದಿದೆ. AI, ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಬಳಸಿ ಮಾಡಿದ ವಿಡಿಯೋವನ್ನು ಯುವತಿಯ ತಾಯಿಗೆ ಕಳುಹಿಸಿದ್ದ ಆರೋಪಿಗಳು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.   ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಆತಂಕಕ್ಕೆ ಒಳಗಾದ  ಯುವತಿಯ ಪೋಷಕರು ಲಕ್ಕವಳ್ಳಿ ಪೊಲೀಸರಿಗೆ ನೀಡಿದ್ದರು.

ದೂರಿನ ಅಧಾರದಲ್ಲಿ ಅಕ್ಷಯ್ ಹಾಗೂ ಸಾಹುಲ್ ಎಂಬವರನ್ನು ಅರೆಸ್ಟ್​​ ಮಾಡಲಾಗಿದೆ. ಆರೋಪಿಗಳಿಬ್ಬರು ಲಕ್ಕವಳ್ಳಿ ಸಮೀಪದ ಬಾವಿಕೆರೆ ಗ್ರಾಮದವರೇ ಆಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಬಾವಿಕೆರೆ ಗ್ರಾಮದ 25 ವರ್ಷದ ಯುವತಿಯ ಪೋಟೋವನ್ನ ಫೇಸ್ಬುಕ್​​ನಿಂದ ಪಡೆದುಕೊಂಡಿದ್ದ ಆರೋಪಿಗಳು ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿದ್ದರು. ಆ ಬಳಿಕ ಯುವತಿಯ ತಾಯಿಗೆ ಬೆಂಗಳೂರು ಮೂಲದ ಯೋಗೇಶ್ ಎಂಬ ಹೆಸರಿನಲ್ಲಿ ಪದೇಪದೇ ಕರೆ ಮಾಡಿ ಹಣ ಕೇಳಿದ್ದರು. ಆರೋಪಿಗಳು ನಿರಂತರ ಬ್ಲ್ಯಾಕ್​​ಮೇಲ್​​ ಮಾಡಲಾರಂಭಿಸಿದಾಗ ಯುವತಿ ಕಡೆಯವರು ಈ ಸಂಬಂಧ   ದೂರು ನೀಡಿದ್ದರು. ಆದರೆ ಪೊಲೀಸ್​​ ತನಿಖೆ ವೇಳೆ  ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ  ಆರೋಪಿಗಳು ಅದೇ ಬಾವಿಕೆರೆ ಗ್ರಾಮದ ಸಾಹುಲ್ ಮತ್ತು ಅಕ್ಷಯ್​​ ಎಂಬುದು ಗೊತ್ತಾಗಿದೆ.

ಇನ್ನು ಆರೋಪಿಗಳು ಮೈತುಂಬ ಸಾಲಮಾಡಿಕೊಂಡಿದ್ದರು. ಹೀಗಾಗಿ ಹೇಗಾದರೂ ಹಣ ಮಾಡಬೇಕೆಂಬ ಆಸೆಗೆ ಬಿದ್ದು ಈ ರೀತಿಯ ಕೆಲಸಕ್ಕೆ ಕೈಹಾಕಿದ್ದರು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದು, ಇವರು ಈ ಹಿಂದೆಯೂ ಇದೇ ತರಹ ಕೆಲವರಿಗೆ ಬ್ಲಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;