ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯನ್ನು ಉಳಿಸುವಂತೆ ಕುದುರೆಮುಖ ಮಜ್ದೂರ್ ಸಂಘವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿತು….
ಕೇಂದ್ರದ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಿಯೋಗ ಭೇಟಿ ಮಾಡಿತು. ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಬ್ರಿಜೇಶ್ ಚೌಟ ನೇತೃತ್ವದ ನಿಯೋಗ ಕುದುರೆಮುಖ ಸಂಸ್ಥೆಯ ಭವಿಷ್ಯದ ಬಗ್ಗೆ ಸಚಿವರ ಗಮನ ಸೆಳೆಯಿತು.
ಕುದುರೆಮುಖ ಸಂಸ್ಥೆಯನ್ನು ಎನ್‌ಎಂಡಿಸಿ ಸಂಸ್ಥೆ ಜೊತೆ ವಿಲೀನ ಮಾಡುವ ಪ್ರಸ್ತಾಪದ ಬಗ್ಗೆಯೂ ಇದೇ ಸಂದರ್ಭದಲ್ಲಿ ಚರ್ಚೆ ನಡೆಯಿತು ಎಂದು ನಿಯೋಗದಲ್ಲಿ ತೆರಳಿದ್ದ ಬಿಜೆಪಿ ಮುಖಂಡ ಶೇಷಗಿರಿ ಕಳಸ ತಿಳಿಸಿದ್ದಾರೆ. ಮುಖಂಡರಾದ ಸುರೇಂದ್ರನ್, ಚಂದ್ರೇಗೌಡ, ಉದಯ್ ಭಗವಾನ್ ಇದ್ದರು.




