ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ–ಹೆಬ್ಬರಿಗೆ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಐದು ಗೋವುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ರಾತ್ರಿ ವೇಳೆ ರಸ್ತೆಯ ಮೇಲೆ ಮಲಗಿದ್ದ ದನಗಳಿಗೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದ ಬಲೆಗೆ ಸಿಲುಕಿದ ದನಗಳಲ್ಲಿ ಐದು ದಿನಗಳು ಸಾವನ್ನಪ್ಪಿವೆ, ಎರಡು ಬದುಕುಳಿದರೂ ಗಂಭೀರ ಗಾಯಗಳಿಂದ ಬಳಲುತ್ತಿವೆ.
ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



