September 13, 2026
;
banakal station

 

 

ಸುರೇಶ್ @ ಸೂರಿ ಬಿನ್ ಆಂಜನಪ್ಪ 23 ವರ್ಷ ಕೂಲಿ ಕೆಲಸ ಬೋವಿ ಜನಾಂಗ ವಾಸ ಆದ್ರಿಹಳ್ಳಿ ಗ್ರಾಮ ಹೋಳೆಹೂನ್ನೂರು ಹೊ. ಭದ್ರಾವತಿ ತಾಲ್ಲೂಕು  ದಿನಾಂಕ:16/2/2017 ರಂದು  ಬಣಕಲ್ ಪೋಲಿಸ್ ಠಾಣ ವ್ಯಾಪ್ತಿಯ ಕದಗೋಡು ಹಳಿಕೆ ಗ್ರಾಮದ ಮಂಜುನಾಥರವರ ಮನೆಯ ಹಿಂಬದಿಯ ಅಡುಗೆ ಕೋಣೆಯ ಸಿಮೆಂಟ್ ಕಿಟಕಿಯನ್ನು ಸ್ಕೋ ಡ್ರೈವರ್ ನಿಂದ ಮೀಟಿ ಮನೆಯ ಒಳಗೆ ಪ್ರವೇಶಿಸಿ ಬೆಡ್ ರೂಂ ನಲ್ಲಿದ್ದ ಬೀರುವಿನ ಕೀಯನ್ನು ತೆಗೆದು ಬಂಗಾರದ ಒಡವೆಗಳನ್ನು ಮತ್ತು 3500 ರೂ ನಗದು ಹಣವನ್ನು ಕಳವು ಮಾಡಿರುವುದು ತನಿಖೆಯಿಂದ ಸಾಬೀತಾಗಿದ್ದು ಭಾ.ದಂ.ಸಂ ಕಲಂ 454,380 ರಡಿಯಲ್ಲಿ ಬಣಕಲ್ ಪೊಲೀಸರು, ವೃತ್ತ ನಿರೀಕ್ಷಕರಾದ ಜಗದೀಶ್ ರವರು ಆರೋಪಿತರುಗಳ ವಿರುದ್ಧ ಆರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಮಾನ್ಯ ಶ್ರೀ ಪ್ರಕಾಶ್ ಪಿ.ಎಂ ಹಿರಿಯ ಸಿಜೆ ಮತ್ತು ಜೆ.ಎಂಎಫ್ ಸಿ ನ್ಯಾಯಾದೀಶರು ಮೂಡಿಗೆರೆ ರವರು ಈ ಪ್ರಕರಣದ ಆರೋಪಿಯ ಮೇಲಿದ್ದ ಆರೋಪ ರುಜುವಾತಾಗಿದೆ ಎಂದು ದಿನಾಂಕ:20/08/2025ರಂದು ಆರೋಪಿಗೆ ಕಲಂ 45 4ರಡಿ । ವರ್ಷಗಳ ಜೈಲು 5,000ರೂ ದಂಡ ಹಾಗು ಕಲಂ 380ಕ್ಕೆ 1 ವರ್ಷಗಳ ಜೈಲು 3.000ರೂ ದಂಡ ವಿಧಿಸಿ ತೀರ್ಪುನ್ನು ನೀಡಿರುತ್ತಾರೆ.

ಶ್ರೀಮತಿ ಆ‌ರ್.ರೇಣುಕ ಸಹಾಯಕ ಸರ್ಕಾರಿ ಅಭಿಯೋಜಕರು ಮೂಡಿಗೆರೆ ರವರು ಸರ್ಕಾರದ ಪರವಾಗಿ ಪ್ರಕರಣವನ್ನು ನಿರ್ವಹಿಸಿ ವಾದ ಮಂಡಿಸಿರುತ್ತಾರೆ.

ನ್ಯಾಯಾಲಯದ ಕರ್ತವ್ಯವನ್ನು ಶ್ರೀಮತಿ ವರ್ಷಣಿ ರವರು ನಿರ್ವಹಿಸಿರುತ್ತಾರೆ.

*************************

ಇನ್ನು ಇದೇ ವ್ಯಕ್ತಿ ದಿನಾಂಕ:19/5/2020 ರಂದು ಮದ್ಯಾಹ್ನ 02.00 ರಿಂದ 2.30 ಗಂಟೆ ಸಮಯದಲ್ಲಿ ಬಾಳೂರು ಪೋಲಿಸ್ ಠಾಣಾ ವ್ಯಾಪ್ತಿಯ ಹೊರಟ್ಟಿ ಗ್ರಾಮದ ಬಿ.ಎಸ್ ಬೊಮ್ಮಯ್ಯರವರ ಮನೆಯ ಹಿಂಭಾಗದ ಮೇಲ್ದಾದಣಿಯನ್ನು ಹೆಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಬೆಡ್ ರೂಂ ನಲ್ಲಿದ್ದ ಬೀರುವಿನ ಕೀಯನ್ನು ಬಳಸಿ ಡೋ‌ರ್ ತೆಗೆದು ಲಾಕರ್‌ನ್ನು ಸ್ಪೂ ಡ್ರೈವರ್ ನಿಂದ ಮೀಟಿ ತೆಗೆದು ಬಂಗಾರದ ಒಡವೆಗಳನ್ನು ಮತ್ತು 2000 ರೂ ನಗದು ಕಳ್ಳತನ ಮಾಡಿದ್ದ ಆರೋಪದಲ್ಲಿ ಬಂಧಸಲಾಗಿತ್ತು.

ಈ ಪ್ರಕರಣದ ಆರೋಪಿಯ ಮೇಲಿದ್ದ ಆರೋಪ ರುಜುವಾತಾಗಿದೆ ಎಂದು ದಿನಾಂಕ:20/08/2025ರಂದು ಆರೋಪಿಗೆ ಕಲಂ 454ರಡಿ 1 ವರ್ಷಗಳ ಜೈಲು 5,000ರೂ ದಂಡ ಹಾಗು ಕಲಂ 380ಕ್ಕೆ 1 ವರ್ಷಗಳ ಜೈಲು 3.000ರೂ ದಂಡ ವಿಧಿಸಿ ತಿರ್ಪನ್ನು ನೀಡಿರುತ್ತಾರೆ.

ಶ್ರೀಮತಿ ಆರ್.ರೇಣುಕ ಸಹಾಯಕ ಸರ್ಕಾರಿ ಅಭಿಯೋಜಕರು ಮೂಡಿಗೆರೆ ರವರು ಸರ್ಕಾರದ ಪರವಾಗಿ ಪ್ರಕರಣವನ್ನು ನಿರ್ವಹಿಸಿ ವಾದ ಮಂಡಿಸಿರುತ್ತಾರೆ.

ನ್ಯಾಯಾಲಯದ ಕರ್ತವ್ಯವನ್ನು ಅಭಿಷೇಕ್, ಬಿ.ಎಸ್ ಮತ್ತು ಅನಿಲ್ ಎಂಆರ್ ರವರು ನಿರ್ವಹಿಸಿರುತ್ತಾರೆ.

ಬಂಗಾರದ ಬೆಲೆ ಹೆಚ್ಚಾಗಿದ್ದು ಕಳ್ಳತನಗಳೂ ಹೆಚ್ಚುತ್ತಿರುವ ಇಂತಹ ಸಮಯದಲ್ಲಿ ಮಾನ್ಯ ನ್ಯಾಯಾಲಯವು ನೀಡಿರುವ ತೀರ್ಪು ಅತ್ಯಂತ ಶ್ಲಾಘನೀಯವಾಗಿರುತ್ತದೆ ಕಳ್ಳತನವನ್ನೇ ಚಾಳಿಯಾಗಿ ರೂಢಿಸಿಕೊಂಡಿರುವ ಕಳ್ಳರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿರುತ್ತದೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;